KARNATAKA TEACHER WELFARE FUND FINANCIAL ASSISTANCE FOR TEACHERS’ CHILDREN 2022 | 2022-23ನೇ ಸಾಲಿಗಾಗಿ ಶಿಕ್ಷಕರ ಮಕ್ಕಳಿಗೆ ಉನ್ನತ ವ್ಯಾಸಂಗಕ್ಕಾಗಿ ಧನಸಹಾಯ

ಶಿಕ್ಷಕರ ಕಲ್ಯಾಣ ಪ್ರತಿಷ್ಠಾನದಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
Please wait 0 seconds...
Scroll Down and click on Go to Link for destination
Congrats! Link is Generated

 

 2022-23 ಶಿಕ್ಷಕರ ಮಕ್ಕಳಿಗೆ ಉನ್ನತ ವ್ಯಾಸಂಗಕ್ಕಾಗಿ ಧನಸಹಾಯ ಕೋರಿ ಅರ್ಜಿ ಆಹ್ವಾನಿಸಲಾಗಿದೆ.


2022-23ನೇ ಶೈಕ್ಷಣಿಕ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ಶಿಕ್ಷಕರ ಮಕ್ಕಳ ಉನ್ನತ ವ್ಯಾಸಂಗಕ್ಕೆ ಧನಸಹಾಯ ಮಂಜೂರು ಮಾಡುವ ಸಲುವಾಗಿ ರಾಷ್ಟ್ರೀಯ ಶಿಕ್ಷಕರ ಕಲ್ಯಾಣ ಪ್ರತಿಷ್ಠಾನದಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ :
1.ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯ ಕಛೇರಿಗೆ ONLINE ಮೂಲಕ ಅರ್ಜಿಗಳನ್ನು ಸಲ್ಲಿಸುವ ಕೊನೆಯ ದಿನಾಂಕ.20-01-2023.

ಸಾರ್ವಜನಿಕ ಶಿಕ್ಷಣ ಇಲಾಖೆಯ ಅರ್ಹ ಶಿಕ್ಷಕರು/ ನಿವೃತ್ತ ಶಿಕ್ಷಕರು/ ಉಪನ್ಯಾಸಕರು/ ನಿವೃತ್ತ ಉಪನ್ಯಾಸಕರು/ ಪ್ರಾಂಶುಪಾಲರು ONLINE ಮೂಲಕವೇ ಕಡ್ಡಾಯವಾಗಿ ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸತಕ್ಕದ್ದು.

ಇನ್ನು ಮುಂದೆ ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಕಛೇರಿಯಲ್ಲಿ ಆಜೀವ ಸದಸ್ಯತ್ವ ನೋಂದಣಿ ಪಡೆಯಲು ಇಚ್ಛಿಸುವ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣದ ವ್ಯಾಪ್ತಿಯ ಶಿಕ್ಷಕರು/ ನಿವೃತ್ತ ಉಪನ್ಯಾಸಕರು/ ನಿವೃತ್ತ ಶಿಕ್ಷಕರು/ ಉಪನ್ಯಾಸಕರು/ ಪ್ರಾಂಶುಪಾಲರು ಹಾಗೂ ಈಗಾಗಲೇ ಭೌತಿಕ ಕಾರ್ಡ್ ಹೊಂದಿರುವವರೂ ಸಹ ಆನ್‌ಲೈನ್‌ ಮುಖಾಂತರ ಅರ್ಜಿ ಸಲ್ಲಿಸಬಹುದಾಗಿದೆ.ಹಾಗೂ ಈಗಾಗಲೇ ನಿಧಿ ಕಛೇರಿಯಿಂದ ಆನ್‌ಲೈನ್‌ನಲ್ಲಿ ಆಜೀವ ಸದಸ್ಯತ್ವದ ಹೊಸ ನೋಂದಣಿ ಸಂಖ್ಯೆ ಪಡೆದ ಶಿಕ್ಷಕರು/ ಉಪನ್ಯಾಸಕರು/ ನಿವೃತ್ತಿ ಹೊಂದಿರುವ ಶಿಕ್ಷಕರು/ ಉಪನ್ಯಾಸಕರು ಮಾತ್ರ ತಮ್ಮ ಮಗುವಿನ ವಿವರಗಳನ್ನು ಸಂಬಂಧಿಸಿದ ONLINE PORTAL ನಲ್ಲಿ ಗಣಕೀಕರಿಸುವಂತೆ ಸೂಚಿಸಿದೆ.
 
ಸೂಚನೆ: ಶಿಕ್ಷಕರ ಕಲ್ಯಾಣ ನಿಧಿ ಕಛೇರಿಯ ಎಲ್ಲಾ ಸೌಲಭ್ಯಗಳನ್ನು ಇನ್ನು ಮುಂದೆ ONLINE ಮೂಲಕವೇ ಒದಗಿಸಲಾಗುವುದು, ಈಗಾಗಲೇ ಭೌತಿಕ ಆಜೀವ ಸದಸ್ಯತ್ವ ಕಾರ್ಡ್‌ನ್ನು ಹೊಂದಿರುವವರೂ ಸಹ ಆಜೀವ ಸದಸ್ಯತ್ವ ವಿವರಗಳನ್ನು ಗಣಕೀಕರಿಸಿ ಹೊಸ ಸದಸ್ಯತ್ವ ಸಂಖ್ಯೆಯನ್ನು ಪಡೆದ ನಂತರವೇ ಸದರಿ ಧನಸಹಾಯಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.

👉ಉನ್ನತ ವ್ಯಾಸಂಗದ ಧನಸಹಾಯಕ್ಕಾಗಿ ಬರುವ ಭೌತಿಕ ಅರ್ಜಿಗಳನ್ನು ಕಛೇರಿಯಲ್ಲಿ ಪರಿಗಣಿಸಲಾಗುವುದಿಲ್ಲ. ಶಿಕ್ಷಕರ ಕಲ್ಯಾಣ ನಿಧಿಯ ಜಾಲತಾಣ kstbfonline.karnataka.gov.in URL ಅಥವಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಜಾಲತಾಣ www.schooleducation.kar.nic.in ರಲ್ಲಿನ TBF (TEACHER BENIFIT FUND)/SWF (STUDENT WELFARE FUND) ONLINE SERVICES ಲಿಂಕ್‌ನ ಮೂಲಕ ಆಜೀವ ಸದಸ್ಯತ್ವದ ಹೊಸ ಕಾರ್ಡ್ ಸಂಖ್ಯೆ ಪಡೆದವರು ಮಾತ್ರ ಉನ್ನತ ವ್ಯಾಸಂಗ ಧನಸಹಾಯದ ಅರ್ಜಿ ಸಲ್ಲಿಸಬಹುದಾಗಿದೆ.
👉ಒಂದು ಕುಟುಂಬಕ್ಕೆ ಒಬ್ಬ ವಿದ್ಯಾರ್ಥಿಗೆ ಮಾತ್ರ ಧನಸಹಾಯ ನೀಡಲಾಗುವುದು, ವಿದ್ಯಾರ್ಥಿಯ ತಂದೆ/ತಾಯಿ ಇಬ್ಬರೂ ಶಿಕ್ಷಕರು/ಉಪನ್ಯಾಸಕರಾಗಿದ್ದಲ್ಲಿ ಕುಟುಂಬಕ್ಕೆ ಒಬ್ಬರು ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.
 
👉ಈ ಕೆಳಕಂಡ ನ್ಯೂನ್ಯತೆಗಳನ್ನೊಳಗೊಂಡ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
1. ನಿಯಂತ್ರಣಾಧಿಕಾರಿಗಳ ಸಹಿ ಇಲ್ಲದೆ ನೇರವಾಗಿ ಸೇವೆಯಲ್ಲಿರುವ ಶಿಕ್ಷಕರು ಸಲ್ಲಿಸಿದ ಅರ್ಜಿಗಳು (ನಿವೃತ್ತ ಶಿಕ್ಷಕರನ್ನು ಹೊರತು ಪಡಿಸಿ).

2. ಅರ್ಜಿಯಲ್ಲಿ ನಮೂದಾಗದೇ ಇರುವ ಕೋರ್ಸುಗಳು.

3. CA, PHD ಕೋರ್ಸ್‌ಗಳಿಗೆ ಧನಸಹಾಯ ನೀಡಲಾಗುವುದಿಲ್ಲ.

4. ಶಿಕ್ಷಕರ ಸಹಿ ಇಲ್ಲದ ಅರ್ಜಿಗಳು

5. ಬೋಧಕೇತರ ಸಿಬ್ಬಂದಿ ವರ್ಗದವರಿಗೆ ಉನ್ನತ ವ್ಯಾಸಂಗ ಧನಸಹಾಯಕ್ಕೆ ಅವಕಾಶ ಇರುವುದಿಲ್ಲ. 6. ನಿವೃತ್ತ/ಮೃತ ಶಿಕ್ಷಕರ ಪಿಂಚಣಿ ಪತ್ರ/ ವಾರಸುದಾರರ ಪ್ರಮಾಣ ಪತ್ರ ಇಲ್ಲದಿರುವ ಅರ್ಜಿಗಳು.

7. ಪತಿ/ಪತ್ನಿ ಇಬ್ಬರೂ ಅರ್ಜಿ ಸಲ್ಲಿಸಿದ್ದಲ್ಲಿ ಒಂದು ಅರ್ಜಿಯನ್ನು ಮಾತ್ರ ಪರಿಗಣಿಸಲಾಗುವುದು.

8. ತಿದ್ದುಪಡಿಗಳನ್ನು ಹೊಂದಿರುವ ಅರ್ಜಿಗಳು.

9. ಪ್ರಸಕ್ತ ಸಾಲಿನಲ್ಲಿ ಶಿಕ್ಷಕರ ಮಕ್ಕಳು ವ್ಯಾಸಂಗ ಮಾಡದೇ ಇದ್ದರೂ ಧನಸಹಾಯಕ್ಕೆ ಸಲ್ಲಿಸಿದ ಅರ್ಜಿಗಳು,

10. ಅನುತ್ತೀರ್ಣ/ ಸಂಜೆ ಕಾಲೇಜು ವ್ಯಾಸಂಗದ/ ಖಾಸಗಿ/ ಬಾಹ್ಯ/ ಮುಕ್ತ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಸಲ್ಲಿಸಿದ ಅರ್ಜಿಗಳು.

11. ದಿನಾಂಕ: I5-01-2023ರ ನಂತರ ಬಂದ ಅರ್ಜಿಗಳು,

12. ವ್ಯಾಸಂಗ ಪ್ರಮಾಣ ಪತ್ರ ಸಲ್ಲಿಸದ ಅರ್ಜಿಗಳು.

13. ರಾಷ್ಟ್ರೀಯ ಬ್ಯಾಂಕುಗಳು ವಿಲೀನಗೊಂಡಿರುವುದರಿಂದ ಪ್ರಸ್ತುತ ಚಾಲ್ತಿಯಲ್ಲಿರುವ BANK ACCOUNT NUMBER ಮತ್ತು IFSC CODE ಸಂಖ್ಯೆಯನ್ನು ಕಡ್ಡಾಯವಾಗಿ ಸಲ್ಲಿಸುವುದು.

👉REGISTRATION LINK FOR NEW LMS CARD - CLICK HERE

👉APPLY FOR LMS CARD - CLICK HERE

👉TO APPLY FOR FINANCIAL ASSISSTANCE FOR TEACHERS' CHILDREN - CLICK HERE

FOR TBF ORDER PDF - CLICK HERE


 

टिप्पणी पोस्ट करा

आपल्या प्रतिक्रिया आमच्यासाठी महत्वाच्या आहेत.
कांही शंका असल्यास नक्की विचारा..
Cookie Consent
We serve cookies on this site to analyze traffic, remember your preferences, and optimize your experience.
Oops!
It seems there is something wrong with your internet connection. Please connect to the internet and start browsing again.