LEARNING OUTCOMES 4th KANNADA (ಕಲಿಕಾ ಫಲಗಳು ತರಗತಿ - ೪ ವಿಷಯ - ಕನ್ನಡ)

01.ವಿವಿಧ ಉದ್ದೇಶವನ್ನು ಈಡೇರಿಸಿಕೊಳ್ಳಲು, ತನ್ನ ಭಾಷೆ / ಶಾಲೆಯ ಭಾಷೆಯನ್ನು ಬಳಸಿ ವ್ಯವಹರಿಸುತ್ತಾರೆ.
Please wait 0 seconds...
Scroll Down and click on Go to Link for destination
Congrats! Link is Generated

ಕಲಿಕಾ ಚೇತರಿಕೆ ೨೦೨೨

ತರಗತಿ - ೪     ವಿಷಯ – ಕನ್ನಡ (ಪ್ರಥಮ ಭಾಷೆ)

2ನೇ ತರಗತಿ - ಕಲಿಕಾ ಫಲಗಳು
01.ವಿವಿಧ ಉದ್ದೇಶವನ್ನು ಈಡೇರಿಸಿಕೊಳ್ಳಲು, ತನ್ನ ಭಾಷೆ / ಶಾಲೆಯ ಭಾಷೆಯನ್ನು ಬಳಸಿ         ವ್ಯವಹರಿಸುತ್ತಾರೆ. ಉದಾ: ತಿಳಿದುಕೊಳ್ಳಲು, ಪ್ರಶ್ನೆ ಕೇಳಲು, ತಮ್ಮದೇ ಆದ ಅನುಭವಗಳನ್ನು ಹೇಳಲು, ತರ್ಕಗಳನ್ನು ನೀಡಲು ಮುಂತಾದವ, ವಿವಿಧ ಉದ್ದೇಶಗಳಿಗಾಗಿ ತನ್ನ ಭಾಷೆಯನ್ನು ಮತ್ತು ಶಾಲೆಯ ಭಾಷೆಯನ್ನು ಬಳಸಿಕೊಂಡು ಮಾತುಕತೆಯಾಡುತ್ತಾರೆ. ಉದಾಹರಣೆಗೆ ವಿಷಯವನ್ನು ಅರ್ಥೈಸಿಕೊಳ್ಳಲು ಪ್ರಶ್ನೆ ಕೇಳಲು, ತನ್ನ ಸ್ವಂತದ ಅನುಭವಗಳನ್ನು ಹೇಳಿಕೊಳ್ಳಲು, ಪರ್ಕಿಸಲು ಇತ್ಯಾದಿ.


02.ತಮ್ಮ ನಿಜ ಜೀವನದ ಮತ್ತು ಪರಿಸರ ಅಧಾರಿತ ಅನುಭವಗಳನ್ನು ಆಲಿಸುತ್ತಿರುವ ವಿಷಯ ಸಾಮಗ್ರಿ ಅಂದರೆ ಕವಿತೆ, ಕತೆ, ಪೋಸ್ಟರ್, ಜಾಹೀರಾತು ಮುಂತಾದವುಗಳೊಂದಿಗೆ ಸಂಬಂಧೀಕರಿಸಿ ಮಾತನಾಡಲು ಮತ್ತು ಬರೆಯಲು ಸಮರ್ಥರಾಗುತ್ತಾರೆ. ಭಾಷೆಯಲ್ಲಿ ಅಂತರ್ಗತವಾಗಿರುವ ಧ್ವನಿ, ಪ್ರಾಸ, ಲಯಗಳನ್ನು ಹಿಡಿದು ಆಟವಾಡಿ ಆನಂದಿಸುತ್ತ ತಾನು ಕೃಶಃ ಪದಗಳನ್ನು ಸೃಷ್ಟಿಸಿಕೊಳ್ಳುತ್ತಾರೆ. ಉದಾಹರಣೆಗೆ ಗೇರ್ ಗೇರ್ ಮಂಗಣ್ಣ, ಹಾಕು ಲಾಗ ನೀನಣ್ಣ ಇತ್ಯಾದಿ.


3.ತಮ್ಮ ಕಲ್ಪನಾ ಶಕ್ತಿಯ ಸಹಾಯದಿಂದ ಕತೆ, ಕವಿತೆಗಳನ್ನು ಹೇಳುತ್ತಾರೆ / ಕೇಳುತ್ತಾರೆ / ವಿಸ್ತರಿಸುತ್ತಾರೆ. ಚಿತ್ರಗಳ ಸೂಕ್ಷ್ಮ ಮತ್ತು ಪ್ರತ್ಯೇಕ ಅಂಶಗಳ ಬಗ್ಗೆ ಗಂಭೀರವಾದ ಅವಲೋಕನ ನಡೆಸುತ್ತಾರೆ.


4.ಚಿತ್ರವೊಂದರಲ್ಲಿ ಅನುಕ್ರಮವಾಗಿ ಜೋಡಿಸಿದ ಬೇರೆ ಬೇರೆ ಘಟನೆ, ಪಾತ್ರಗಳ ಸಂದರ್ಭ, ಕಥೆ ಇವುಗಳನ್ನು ನೋಡಿ ಗ್ರಹಿಸುತ್ತಾರೆ ಮತ್ತು ಮೆಚ್ಚಿಕೊಳ್ಳುತ್ತಾರೆ.

 


     3ನೇ ತರಗತಿ- ಕಲಿಕಾ ಫಲಗಳು
5.ಪರಿಚಿತ ಮತ್ತು ಅಪರಿಚಿತ ಸನ್ನಿವೇಶ, ಸಂಭಾಷಣೆ ಮತ್ತು ಸಂವಾದಗಳನ್ನು ಅರ್ಥ ಮಾಡಿಕೊಂಡು ಆಲಿಸಿದ ರಚನೆಗಳ ವಿಷಯವನ್ನು ಘಟನೆಗಳು, ಪಾತ್ರಗಳು ಶಿರೋನಾಮೆ ಮುಂತಾದವುಗಳ ಬಗ್ಗೆ ಮಾತನಾಡುತ್ತಾರೆ, ಪ್ರಶ್ನಿಸುತ್ತಾರೆ ಮತ್ತು ಪ್ರತಿಕ್ರಿಯಿಸುತ್ತಾರೆ ಹಾಗೂ ತಮ್ಮದೇ ಆದ ವಿಧಾನದಿಂದ (ಕವಿತೆ ಕತೆ ಮುಂತಾದವುಗಳನ್ನು) ತಮ್ಮದೇ ಆದ ಭಾಷೆಯಲ್ಲಿ ಅಭಿವ್ಯಕ್ತಿಸುತ್ತಾರೆ ಮತ್ತು ತನ್ನ ಮಾತಿಗೆ ತಾರ್ಕಿಕ ಕಾರಣ ನೀಡುತ್ತಾರೆ.

06.ಕತೆ, ಕವಿತೆ, ಮತ್ತು ಬೇರೆ ವಿಷಯ ಸಾಮಗ್ರಿಗಳನ್ನು ಓದಿ ಮುಖ್ಯವಿಷಯವನ್ನು ಗುರುತಿಸಿ ತಿಳಿಯುವುದರೊಂದಿಗೆ ಅದಕ್ಕೆ ತಮ್ಮ ಕತೆ/ವಿಚಾರಗಳನ್ನು ಸೇರಿಸುತ್ತಾರೆ.

07.ವಿವಿಧ ಪ್ರಕಾರದ ರಚನೆಗಳು/ವಿಷಯ ಸಾಮಗ್ರಿಗಳನ್ನು (ಸಮಾಚಾರ ಪತ್ರಿಕೆ, ಬಾಲ ಪತ್ರಿಕೆ.. ಮುಂತಾದವು) ತಿಳಿದು, ಅನಂತರ ಅವುಗಳನ್ನು ಆಧರಿಸಿ ಪ್ರಶ್ನೆ ಕೇಳುತ್ತಾರೆ ಮತ್ತು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸುತ್ತಾರೆ. ತರಗತಿಯಲ್ಲಿ ನಡೆಯುವ ಸಂವಾದದಲ್ಲಿ ಭಾಗವಹಿಸಿ ಚರ್ಚಿಸುತ್ತಾರೆ.

8.ತಮ್ಮ ಇಚ್ಛಾನುಸಾರ/ಶಿಕ್ಷಕರಿಂದ ನಿಶ್ಚಯಿಸಿದ ಘಟನೆಗಳಲ್ಲಿ ಬಂದಿರುವ ಕಾಗುಣಿತದ ಬಗ್ಗೆ ಎಚ್ಚರಿಕೆ ವಹಿಸಿ ಸ್ವತಃ ಲೇಖನ ಬರೆಯುತ್ತಾರೆ. ವಿವಿಧ ಉದ್ದೇಶಗಳಿಗಾಗಿ ಬರೆಯುತ್ತಿರುವ ಲೇಖನಗಳಲ್ಲಿ ಶಬ್ದಗಳ ಆಯ್ಕೆ, ವಾಕ್ಯ ರಚನೆ, ತಮ್ಮ ಲೇಖನದ ಸ್ವರೂಪಗಳನ್ನು (ಉದಾ: ಮಿತ್ರನಿಗೆ ಪತ್ರ ಬರೆಯುವುದು, ಪತ್ರಿಕಾ ಸಂಪಾದಕರಿಗೆ ಪತ್ರ ಬರೆಯುವುದು) ಆಧರಿಸಿ ನಿರ್ಣಯದೊಂದಿಗೆ ಬರೆಯುತ್ತಾರೆ.

   4ನೇ ತರಗತಿ- ಕಲಿಕಾ ಫಲಗಳು
9.ಕಥೆ, ಕವಿತೆ ಮತ್ತು ಬೇರೆ ವಸ್ತು ವಿಷಯಗಳನ್ನು ತನ್ನದೆ ರೀತಿಯಲ್ಲಿ ಮತ್ತು ಭಾಷೆಯಲ್ಲಿ ಹೇಳುತ್ತಾ ಅದರಲ್ಲಿ ತನ್ನದೆ ಸ್ವಂತದ ಕಥೆ, ವಿಷಯಗಳನ್ನು ಜೋಡಿಸುತ್ತಾರೆ.

10.ಓದಿದ ವಿಷಯವಸ್ತು ಮತ್ತು ತಮಗೆ ದೈನಂದಿನ ಜೀವನದಲ್ಲಿ ಸ್ವತಃ ಅದ ಅನುಭವಗಳನ್ನು ಸೇರಿಸಿ, ಅವುಗಳಿಂದ ಉಂಟಾದ ಸಂವೇದನಾತ್ಮಕ ಮತ್ತು ವಿಚಾರಗಳನ್ನು ಮೌಖಿಕವಾಗಿ / ಲಿಖಿತವಾಗಿ ಅಭಿವ್ಯಕ್ತಪಡಿಸುತ್ತಾರೆ (ಆಡುಭಾಷೆ / ಗ್ರಾಂಥಿಕ ಭಾಷೆ).
 

11.ಓದಿರುವ ಸಾಹಿತ್ಯಗಳ ವಿಷಯವಸ್ತು, ಘಟನೆಗಳು, ಚಿತ್ರಗಳು, ಪಾತ್ರಗಳು, ಶಿರೋನಾಮೆ ಮುಂತಾದವುಗಳ ಬಗ್ಗೆ ಮಾತನಾಡುತ್ತಾರೆ. ಪ್ರಶ್ನಿಸುತ್ತಾರೆ. ತಮ್ಮ ಅಭಿಪ್ರಾಯ ನೀಡುತ್ತಾರೆ. ತಮ್ಮ ಅಭಿಪ್ರಾಯಗಳಿಗೆ ತಾರ್ಕಿಕ ಸಮರ್ಥನೆ ನೀಡುತ್ತಾರೆ.

12. ವಿವಿಧ ಪರಿಸ್ಥಿತಿ ಮತ್ತು ಉದ್ದೇಶಗಳಿಗೆ (ಸೂಚನಾ ಫಲಕದಲ್ಲಿ ಹಾಕುವ ಸೂಚನೆಗಳು, ವಸ್ತುಗಳ ಪಟ್ಟಿ ಕತೆ, ಕವಿತೆ, ಪತ್ರ, ಪ್ರಬಂಧ ಮುಂತಾದವು) ಅನುಸಾರವಾಗಿ ಬರೆಯುತ್ತಾರೆ.

13.ವಿವಿಧ ಸಾಹಿತ್ಯಗಳನ್ನು ಪರಸ್ಪರ ಕೇಳಲು, ಓದಲು ಮತ್ತು ಅವುಗಳ ಮೇಲೆ ಅನಿಸಿಕೆ ನೀಡಲು ಅವುಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ಸೇರಿಸಲು, ವಿಸ್ತರಿಸಲು ಮತ್ತು ಬೇರೆ ಬೇರೆ ವಿಧಾನದಲ್ಲಿ ಬರೆಯುತ್ತಾರೆ.

 

CLICK HERE TO DOWNLOAD ABOVE LEARNING OUTCOMES IN PDF 





टिप्पणी पोस्ट करा

आपल्या प्रतिक्रिया आमच्यासाठी महत्वाच्या आहेत.
कांही शंका असल्यास नक्की विचारा..
Cookie Consent
We serve cookies on this site to analyze traffic, remember your preferences, and optimize your experience.
Oops!
It seems there is something wrong with your internet connection. Please connect to the internet and start browsing again.